Archive for May 5, 2009

ಪ್ರೀತ್ಸೋಣ ಬಾ…!!

ಪ್ರೀತಿ ಕೆಡಿಸುತ್ತೆ ಮತಿ…
ಮರೆಸುತ್ತೆ ನಮ್ಮ ಇತಿ-ಮಿತಿ…
ಜಗವೆ ಹುಚ್ಚರ ಸಂತೆ…
ಬಾ ತಲೆ ಕೆಡಿಸಿಕೊಳ್ಳೋಣ ನಾವೂ…!!

ಪ್ರೀತಿ ನೋವ ಒಡತಿ…
ನಲಿವು ಅದರ ಸವತಿ…
ಯಾರಿಗಿಲ್ಲ ನೋವು…??
ಬಾ ಈ ನೋವ ಸವಿಯೋಣ ನಾವು…!!

ಪ್ರೀತಿ ವಿಷದ ರೀತಿ…
ಹೇಳೋದು ಜಗದ ನೀತಿ…
ಯಾರಿಗಿಲ್ಲ ಸಾವು…??
ಬಾ ಈ ವಿಷವ ಕುಡಿಯೋಣ ನಾವು…!!

May 5, 2009 at 12:59 am Leave a comment

ಸೂರ್ಯನತ್ತ ಅಗ್ನಿಶಾಮಕ

ಎದೆಯಲಿ ಉರಿಯೋ ನೋವಿನ ಜ್ವಾಲೆ..
ನೀ ತೊರೆದ ಗಾಯವದು ಘಾತಕ…..,
ಕುಡಿಯೊಡೆದ ಪ್ರೀತಿಗೆ ಕೊಳ್ಳಿಯನಿಟ್ಟೆ..
ಮನದ ಮನೆಯಲಿ ನಿತ್ಯವೂ ಸೂತಕ….!!

ಗೆಳೆಯರು ಹೇಳುತ್ತಾರೆ….,
“ನಶೆಯೇ ನೋವನು ಮರೆಸೋ ಮದ್ದು..
ಗಡoಗಿನಲಿ ಗುಟುಕರಿಸು ಪಾನಕ…!!”
ಅವರಿಗೇನು ಗೊತ್ತು ಪಾಪ…??
ಆರದು ಅದರಿಂದ ಎದೆಯ ಜ್ವಾಲೆ…
ಅದೇನಿದ್ದರೂ, ಸೂರ್ಯನತ್ತ ನುಗ್ಗಿಬಂದಂತೆ
ಇಳೆಯ ಅಗ್ನಿಶಾಮಕ……!!

May 5, 2009 at 12:56 am 2 comments

ನಶೆ

ನಶೆಯದೆಷ್ಟು ಚೆಲುವೆ…
ನಿನ್ನ ಕಣ್ಣುಗಳ ರಂಗಿನಲಿ…??
ನೋಡಿ ನಾನಾದೆ ದಂಗು…
ನಿಜ, ಕೇವಲ ಕಣ್ಣುಗಳಲ್ಲ ಅವು…
ನಶೆಯನೀಯೊ ಗಡoಗು…!!

May 5, 2009 at 12:52 am Leave a comment

ಹೃದಯವ ನೋಯಿಸುವೆ ಏಕೆ…??

ಕೈಗಳ ಹಿಂದೆ ನಿನ್ನಯ ಸುಂದರ
ಮುಖವನು ಮುಚ್ಚುವುದೇಕೆ…??
ನನ್ನನು ಕಂಡರೆ ನಾಚಿಕೆಯೆಂದಾದರೆ
ನೀ ಎದುರಿಗೆ ಬರುವುದು ಏಕೆ….??

ಕೋರೆಗಣ್ಣಲೀ ನೋಡುತ ನನ್ನಯ
ಹೃದಯವ ಚುಚ್ಚುವುದೇಕೆ…??
ನನ್ನನು ಕಂಡರೆ ಇಷ್ಟವೆಂದಾದರೆ
ನೀ ಪ್ರೀತಿಯ ಬಚ್ಚಿಡುವುದು ಏಕೆ…??

ನನ್ನಯ ಕಣ್ಣಿನ ತೇವವ ನೋಡಿ
ತಿರುಗಿ ಅಳುವೆ ನೀನೇಕೆ…??
ಹೃದಯದ ನೋವ ನೀ ಅರಿತಿದ್ದರು
ಹೃದಯವ ನೋಯಿಸುವೆ ಏಕೆ…??

May 5, 2009 at 12:49 am Leave a comment

ಕೋರಿಕೆ……!!

ನಿನ್ನ ಕಣ್ಣಿoದ ಹೊರಟಿತು ಮಾತು
ನಾ ಜಾರಿದೆ ಪ್ರೀತಿಯ ಹೊಳೆಗೆ…
ಬಿಡದೆ ಸೆಳೆದಿದೆ ನಿನ್ನಯ ನಶೆಯು
ಮೈ ಮರೆತಿಹೆ ಪ್ರೀತಿಯ ಕರೆಗೆ…..

ಪ್ರೀತಿಯೆಂದರೆ ನೋವಿನ ಸಂತೆ
ಎನ್ನುವ ಮೂಢರು ಈ ಜಗದೊಳಗೆ….
ಸಾವ ಭಯವ ಮೀರಿಸಿ ಸೆಳೆವುದು..
ಪ್ರೀತಿಯೇ ಪತಂಗವ ದೀಪದ ಕಡೆಗೆ…

ಪ್ರೀತಿಯಿನಿತಿಲ್ಲ ನಿನಗೆ ನನ್ನಲ್ಲಿ
ಸುಮ್ಮನೆ ನಾಟಕ ಗೊತ್ತೆನಗೆ…
ನಾಟಕವಾದರೂ ಬೇಸರವಿಲ್ಲ
ಮಾಡುತಲಿರು ನಾ ಇರೋವರೆಗೆ…

ನನ್ನಯ ಕೋರಿಕೆ ಇಷ್ಟೇ ಚೆಲುವೆ
ಆದರೆ ಒಮ್ಮೆ ಬಂದುಬಿಡು…..
ಬಂದೆಯೆಂದರೆ ಇರಲೇಬೇಕು
ನನ್ನ ಕೊನೆಯುಸಿರು ಇರೋವರೆಗೆ….

May 5, 2009 at 12:47 am Leave a comment


 

May 2009
M T W T F S S
« Apr   Jul »
 123
45678910
11121314151617
18192021222324
25262728293031

ಭೇಟಿಯಿತ್ತ ಆತ್ಮೀಯರು

  • 3,164 ಮಂದಿ

Recent Posts


Follow

Get every new post delivered to your Inbox.