ಹೀಗೊಂದು ಸಂಜೆ
July 9, 2009 at 4:47 am Leave a comment
ಅವಳೆದೆಯೊಳಗಡಿಯಿಡೊ ಘಳಿಗೆ…
ಬರ ಹೇಳಿಹೆ ತುಂತುರು ಮಳೆಗೆ..
ತೆರೆದಿರುವೆನು ಮುತ್ತಿನ ಮಳಿಗೆ..
ಬಂದರೆ ಕ್ಷಣ ಕ್ಷಣವೂ ರಸದೀವಳಿಗೆ…
ನೀ ತೋರದಿರೂ ಇಂದವಸರ…
ಮರೆಯಾಗದೆ ನಿಲ್ಲು ಓ ನೇಸರ…
ಬರಿ ಬಾನೆoದರೆ ಬಲು ಬೇಸರ..
ಮಳೆ ಬಿಲ್ಲಿಗೆ ಕೊಡು ತುಸು ಉಸಿರ…
ತಂಗಾಳಿಯೆ ಬೀಸು ನೀ ಮೆಲ್ಲ..
ಮುಂಗುರುಳ ನರ್ತನಕೆ ಬರಿ ಸೊಲ್ಲ..
ನಾಚಿ ಕೆಂಪಿಡುತಿರೆ ಸಖಿ ಗಲ್ಲ..
ಕದ್ದು ಮುತ್ತಿಡುವೆ ನಾ ಕಳ್ಳ…
Entry filed under: Uncategorized. Tags: .
Trackback this post | Subscribe to the comments via RSS Feed