Posts filed under ‘ಹನಿಗವನ’

ಹೆಸರಿಡದ ಹನಿಗಳು….!!

ಹಾಗೇ ಹೊಳೆದ ಕೆಲವು ಸಾಲುಗಳು… ಇವುಗಳಿಗೆ ಹೆಸರಿಡುವ ಸಾಹಸ ಮಾಡದೇ ಹಾಗೇ ಪೋಸ್ಟ್ ಮಾಡಿದ್ದೇನೆ… ಓದಿ ಏನನ್ನಿಸಿತು…?? ದಯವಿಟ್ಟು ಹೇಳಿ…

1.

ಅದೇನು ಆತುರ ನಿನಗೆ..??
ನಾನು ಕಣ್ಣು ಮಿಟುಕಿಸುವ ಮೊದಲೇ…
ನನ್ನ ಗಲ್ಲವ ಕಚ್ಛಾಯ್ತು…!!
ಅದೆಷ್ಟು ಗಾಢ ವರ್ಣ
ನಿನ್ನ ಲಿಪ್ ಸ್ಟಿಕ್ನದು..??
ನನಗರಿವಿಲ್ಲದೆಯೇ
ನಾಳಿನ ನ್ಯೂಸ್ ಪೇಪರ್
ಅಚ್ಛಾಯ್ತು…..!!

****************************
2.

ಮಂದಿರದ ಕೇಸರಿ ಪತಾಕೆ….
ಮಸೀದಿಯ ಹಸಿರು ಗೋಡೆ….
ಚರ್ಚಿನ ಬಿಳಿಯ ಬಾಗಿಲು….
ಸೂರ್ಯನುದಯಕ್ಕೆ ಕಾತರಿಸಿವೆ…
ಸೂರ್ಯನ ಬೆಳಕಲ್ಲಿ ಅವುಗಳ
ನೆರಳಿಗೆ ಒಂದೇ ಬಣ್ಣ…..!!

****************************
3.

ನವ ವಧುವಂತೆ
ಸಿಂಗರಿಸಿಕೊಂಡು
ಭೂ ತಾಯಿ
ಮೆರವಣಿಗೆ ಹೊರಟಿದ್ದಾಳೆ…
ಚೆಲುವಿಗೆ
ಮನಸೋತ ತಾರೆಗಳು
ಮೋಡದ ಮರೆಯಲ್ಲಿ ನಿಂತು
ಫೋಟೋ ಕ್ಲಿಕ್ಕಿಸುತ್ತಿವೆ…!!

May 21, 2009 at 12:48 am Leave a comment

ಬೆಂಕಿ ಮತ್ತು ಹೊಗೆ

ಬೆಂಕಿಯಿಲ್ಲದೇ ಹೊಗೆಯಾಡುವದಿಲ್ಲ
ನೀನು ಹೃದಯಕ್ಕೆ ಬೆಂಕಿಯಿಟ್ಟೆ….
ಗಡoಗಿನ ಗೋಡೆಗೊರಗಿ,
ಕೊರಗಿ, ಸೊರಗಿ…
ನಾನು ಹೊಗೆಯ
ಸುರುಳಿಗಳಲ್ಲಿ ಲೀನವಾದೆ…!!

May 21, 2009 at 12:37 am Leave a comment

ನಶೆ

ನಶೆಯದೆಷ್ಟು ಚೆಲುವೆ…
ನಿನ್ನ ಕಣ್ಣುಗಳ ರಂಗಿನಲಿ…??
ನೋಡಿ ನಾನಾದೆ ದಂಗು…
ನಿಜ, ಕೇವಲ ಕಣ್ಣುಗಳಲ್ಲ ಅವು…
ನಶೆಯನೀಯೊ ಗಡoಗು…!!

May 5, 2009 at 12:52 am Leave a comment

ಕಾರಣ..!

ಹುಡುಕಿದರೂ ಸಿಗದು ಕಾರಣ..
ದಿನ ರಾತ್ರಿ ಕನಸುಗಳ ಅನಾವರಣ…
ನೀರಸ…ನಿರಾಕಾರ….
ಪ್ರಸಾರ ಕಪ್ಪು-ಬಿಳುಪು….
ನೀ ಸುಳಿದರೆ ಮಾತ್ರ….
ಅವುಗಳಿಗೆ ಮಳೆಬಿಲ್ಲ ವರ್ಣ….

dee

ಹುಡುಕಿದರೂ ಸಿಗದು ಕಾರಣ…
ಬರೆದ ಪಲ್ಲವಿಗಳಿಗೆ ಸಿಗದು ಚರಣ…
ಅಸ್ಪಷ್ಟ… ಅಸಂತುಷ್ಟ…
ಸಾಲುಗಳೆಲ್ಲ ತಪ್ಪು-ತಪ್ಪು…
ನೀ ಪದವಾದರೆ ಮಾತ್ರ….
ಕವಿತೆಗಳಲಿ ಜೀವ ಸ್ಫುರಣ….

April 10, 2009 at 8:43 pm Leave a comment

ನೀ ಬರಲಿಲ್ಲ….!!!

ಕೈಯ್ಯಲ್ಲಿ ಮಲ್ಲಿಗೆ ಮಾಲೆ….,
ಮುದುಡಿ ಹೋದರೂ, ನೀ ಬರಲಿಲ್ಲ….
ಎದೆಯಲ್ಲಿ ಉರಿಯೊ ಜ್ವಾಲೆ….,
ಬತ್ತಿದರೂ ಕಣ್ಣೀರು, ಅದು ಆರಲೇ ಇಲ್ಲ……!!!

April 2, 2009 at 10:49 pm 1 comment

ಪ್ರೀತಿ

ಪ್ರೀತಿಯೆಂದರೆ
ನಾಲ್ಕು ಕಣ್ಣುಗಳು
ಕಲೆತು ಕಾಣೋ
ಕನಸು….!!

March 31, 2009 at 10:44 am Leave a comment

ಹುಟ್ಟು

ನಿನ್ನ
ತೋಳ್ತೆಕ್ಕೆಯಲ್ಲಿ
ಕನಸುಗಳು
ರೆಕ್ಕೆ ಕಟ್ಟುತ್ತವೆ…..
ಕನಸುಗಳಲ್ಲಿ
ಕವನಗಳು
ಹುಟ್ಟುತ್ತವೆ……!!

March 31, 2009 at 10:41 am Leave a comment

ಯುಗಾದಿ

ಇಂದು ಇಲ್ಲಿ ನಾಳೆ ಅಲ್ಲಿ
ನಿತ್ಯ ನಿರಂತರ ಪಯಣ…
ಜಗವ ಬೆಳಗುವ ಕಾಯಕದಿ
ಸೋತು ನಿಲ್ಲನೆಂದಿಗು ಅರುಣ…

ಹಸಿದ ನೆಲಕೆ ದಣಿದ ಜೀವಕೆ..
ಸುರಿಸಿ ಸ್ಪೂರ್ತಿಯ ಸಿಂಚನ…
ಪ್ರಕೃತಿಯ ಬೆಡಗ ಇಮ್ಮಡಿಪ ವರುಣ
ತೊಡಿಸಿ ಹಸಿರಿನಾಭರಣ…

ಒಂದು ಹುಟ್ಟು ಒಂದೆ ಮರಣ
ಮೋಹ ಮಾಯೆಯು ವ್ಯರ್ಥ…
ಯುಗದ ಅಂತ್ಯ ಯುಗದ ಆದಿ..
ತರಲಿ ಬದುಕಿಗೆ ಹೊಸ ಅರ್ಥ….

March 27, 2009 at 4:07 am Leave a comment

ಬಂದುಬಿಡು ಬೆಳಕಂತೆ…..!!

ಕೋಗಿಲೆಯ ಧನಿಯಲ್ಲಿ ಮೊದಲಿನಿಂಪಿಲ್ಲ….

ನಿನ್ನಯಾ ಧನಿಯದಕೆ ಕಲಿಸು…….

ಅರಳಿರುವ ಸುಮಗಳಲಿ ಇನಿತು ಕಂಪಿಲ್ಲ….

ಮರೆಯದೇ ಮೈಗಂಧ ಬೆರೆಸು…..

ಬೀಸುತಿಹ ಗಾಳಿಯಲಿ ಅಸಲು ತಂಪಿಲ್ಲ…..

ನಿನ್ನುಸಿರ ತುಸು ತಂಪ ಕಲೆಸು……

ನೀನಿರದ ಬದುಕು ಬದುಕಲ್ಲ ಗೆಳತಿ…..

ಬಂದುಬಿಡು ಬೆಳಕಂತೆ…..

ಮುಸುಕಿರುವ ಮಬ್ಬನ್ನು ಸರಿಸು…..

March 20, 2009 at 5:29 am Leave a comment

ಮುತ್ತು

ಚಳಿಯಾಗಿರಲು ಮೈಗೆ..
ಕೊಡುವೆ ಬಿಸಿ ಮುತ್ತು
ಕಹಿಯಾಗಿರಲು ಬಾಳ್ವೆ..
ಕೊಡುವೆ ಸಿಹಿ ಮುತ್ತು
ಒಂದಲ್ಲ.. ಎರಡಲ್ಲ
ಸಾವಿರದ ಹತ್ತು…!!

May 24, 2008 at 2:57 am 5 comments

Older Posts


 

May 2012
M T W T F S S
« Sep    
 123456
78910111213
14151617181920
21222324252627
28293031  

ಭೇಟಿಯಿತ್ತ ಆತ್ಮೀಯರು

  • 3,164 ಮಂದಿ

Recent Posts


Follow

Get every new post delivered to your Inbox.